Shivanand Patil
@iShivanandpatil
Followers
4K
Following
600
Media
1K
Statuses
2K
Official account of Shri Shivanand Patil I Minister for Textiles, Sugarcane Development & APMC, GoK I District Incharge Haveri I MLA Basavana Bagevadi
Joined June 2018
“ಕಾಗಿನೆಲೆ ಅಭಿವೃದ್ಧಿಗೆ ಮಹತ್ವದ ನಿರ್ಧಾರಗಳು: ಪ್ರಾಧಿಕಾರದ 13ನೇ ಸಭೆ” ಇಂದು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯಲ್ಲಿ ಭಾಗವಹಿಸಿ, ಕನಕದಾಸರ ಪರಂಪರೆ ಮತ್ತು ಕರ್ಮಭೂಮಿಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. #KagineleDevelopment #KanakadasaHeritage #CulturalPreservation
0
0
2
ದಿನಾಂಕ: 29-10-2025 ರ ಮಾಧ್ಯಮ ವರದಿಗಳು ರಾಜ್ಯದಲ್ಲಿ ಘಟಕ ಸ್ಥಾಪನೆಗೆ ಜವಳಿ ಉದ್ಯಮಿಗಳ ಆಕರ್ಷಣೆಗೆ ಅಗತ್ಯ ನೆರವು ಕೋರಿ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ನೀತಿಯ ವರದಿ ಸಿದ್ದಪಡಿಸಿ ಎಂದು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಕುರಿತು ಮಾಧ್ಯಮ ವರದಿಗಳು
0
0
2
ಬಾಲ ನಟನಾಗಿ, ಯಶಸ್ವಿ ನಾಯಕ ನಟನಾಗಿ, ಮತ್ತು ಹೃದಯವಂತ ಸಮಾಜ ಸೇವಕನಾಗಿ ಲಕ್ಷಾಂತರ ಜನರ ಮನ ಗೆದ್ದ ಬಹುಮುಖಿ ವ್ಯಕ್ತಿತ್ವ, ಪವರ್ ಸ್ಟಾರ್ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯಂದು ಆದರಪೂರ್ವಕ ನಮನಗಳು ಮಾನವೀಯತೆ ಮತ್ತು ಸರಳತೆಗೆ ಮಾದರಿಯಾಗಿದ್ದ ಇವರ ಬದುಕು ಕನ್ನಡಿಗರ ಮನದಲ್ಲಿ ಎಂದೆಂದಿಗೂ ಅಮರ. #puneethrajkumar
0
0
3
ರೈತರ ಹಿತದೃಷ್ಟಿಯಿಂದ, ಮೆಕ್ಕೆಜೋಳ ಖರೀದಿಗೆ ಸಂಬಂಧಿಸಿದ ಪ್ರಮುಖ ನೀತಿ ಮತ್ತು ಕಾರ್ಯವಿಧಾನಗಳ ಕುರಿತು ಚರ್ಚಿಸಲು ಉನ್ನತ ಮಟ್ಟದ ಸಮಿತಿ ಸಭೆಯು ದಿನಾಂಕ 28.10.2025 ರಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಸಭಾಂಗಣ, ನಂ.16, 2ನೇ ಮುಖ್ಯರಸ್ತೆ, ರಾಜಭವನ ರಸ್ತೆ, ಬೆಂಗಳೂರು ಇಲ್ಲಿ ಯಶಸ್ವಿಯಾಗಿ ನಡೆಯಿತು. #KarnatakaAgriculture
0
0
3
ಎ.ಪಿ.ಎಂ.ಸಿ.ಗೆ ನೆರವು ನೀಡಿದ ಹಿನ್ನಲೆಯಲ್ಲಿ, ಕೆ.ಜಿ.ಎಫ್ ಶಾಸಕರಾದ ಶ್ರೀಮತಿ ಎಂ. ರೂಪಕಲಾ ಶಶಿಧರ್ ಅವರು ವಿಧಾನಸೌಧದಲ್ಲಿ ಭೇಟಿ ಮಾಡಿ ಧನ್ಯವಾದ ಹೇಳಿದರು. ಈ ಹಿಂದೆ ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ, ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿರುವುದನ್ನು ನೆನೆಪಿಸಿ ಕೃತಜ್ಞತೆ ಸಲ್ಲಿಸಿದರು. #KarnatakaProgress
0
0
3
ವಿದೇಶದಿಂದ ಭಾರತಕ್ಕೆ ಬಂದು ಅಧ್ಯಾತ್ಮದ ಜೊತೆಗೆ ಸಮಾಜ ಸೇವಕಿಯಾಗಿ ಮಹಿಳೆಯರ ಜಾಗೃತಿಗಾಗಿ ಹಗಲಿರುಳು ಶ್ರಮಿಸಿದ ಸ್ವಾಮಿ ವಿವೇಕಾನಂದರ ಅನುಯಾಯಿ, ಭಾರತದ ಹೆಮ್ಮೆಯ ಪುತ್ರಿ ಸಹೋದರಿ ನಿವೇದಿತಾ ಅವರ ಜಯಂತಿಯಂದು ಭಾವಪೂರ್ಣ ಪ್ರಣಾಮಗಳು. #SisterNivedita
0
0
4
ಸಮಾನತೆಯ ಮತ್ತು ನ್ಯಾಯದ ತತ್ವಗಳನ್ನು ಜೀವಂತಗೊಳಿಸಿ, ಶೋಷಿತ ಸಮುದಾಯಗಳ ಧ್ವನಿಯಾಗಿ ದೇಶದ ಅತ್ಯುನ್ನತ ಹುದ್ದೆಗೇರಿದ ಮಹಾನ್ ನಾಯಕರು, ಮಾಜಿ ರಾಷ್ಟ್ರಪತಿಗಳಾದ ಶ್ರೀ ಕೆ. ಆರ್. ನಾರಾಯಣನ್ ಅವರ ಜಯಂತಿಯಂದು ವಿನಯಪೂರ್ವಕ ನಮನಗಳು. #KRNarayan
0
0
4
ಸಹಕಾರಿ ಸಂಘಗಳು ರೈತರಿಗೆ ಮತ್ತು ಗ್ರಾಮೀಣ ಸಮುದಾಯಕ್ಕೆ ಶಕ್ತಿ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಈ ಹೊಸ ಕಟ್ಟಡವು ಜಂಬಗಿ(ಅ) ಗ್ರಾಮದ ಜನರಿಗೆ ಇನ್ನಷ್ಟು ಉತ್ತಮವಾಗಿ ಸೇವೆ ಸಲ್ಲಿಸಲು ಸಹಕಾರಿಯಾಗಲಿ ಎಂದು ಹಾರೈಸುತ್ತೇನೆ. #ShivanandPatil #Vijayapura #Jambagi #ಸಹಕಾರಿಸಂಘ #ನೂತನಭವನ #ರೈತಸೇವೆ #ಗ್ರಾಮೀಣಾಭಿವೃದ್ಧಿ
0
0
0
ವಿಜಯಪುರ ತಾಲೂಕ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿ.ಎ.ಪಿ.ಸಿ.ಎಂ.ಎಸ್) ಗೆ ಅವಿರೋಧವಾಗಿ ಆಯ್ಕೆಯಾದ ನೂತನ ನಿರ್ದೇಶಕರು ಇಂದು ನನಗೆ ಸನ್ಮಾನ ಮಾಡಿದರು. ಹಿಟ್ನಳ್ಳಿ ಮತ್ತು ಉತ್ನಾಳ ಗ್ರಾಮಸ್ಥರೊಂದಿಗೆ ನನ್ನ ಗೃಹ ಕಛೇರಿಗೆ ಆಗಮಿಸಿ ಸನ್ಮಾನಿಸಿದ ನಿರ್ದೇಶಕರಿಗೆ ನನ್ನ ಧನ್ಯವಾದಗಳು.
0
0
2
ಇಂದು ವಿಜಯಪುರದಲ್ಲಿ ವಿಜಯಪುರ ಜಿಲ್ಲಾ ಉಪ್ಪಾರ ಸೇವಾ ಸಂಘ ಮತ್ತು ವಿಜಯಪುರ ಜಿಲ್ಲಾ ನೌಕರರ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಹೊಸದಾಗಿ ನೇಮಕಾತಿ ಹೊಂದಿದ ನೌಕರರಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದೆನು. #ShivanandPatil
0
0
2
ರಾಜ್ಯದ ರಾಜಕೀಯ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ಧೀಮಂತ ನಾಯಕರು, ಹಿಂದುಳಿದ ವರ್ಗದ ನೇತಾರರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪ ಅವರ ಜಯಂತಿಯಂದು ಗೌರವಪೂರ್ವಕ ಪ್ರಣಾಮಗಳು. #Bangarappa #Vijayapura #shivanandpatil
0
0
3
ದೇಶ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಾಹಸಿ ಯೋಧರಿಗೆ ಭಾರತೀಯ ಪದಾತಿ ದಳದ ದಿನದ ಹಾರ್ದಿಕ ಶುಭಾಶಯಗಳು. 1947ರಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಆಕ್ರಮಣಕಾರಿ ಪಾಕಿಸ್ತಾನಿ ಪಡೆಗಳಿಂದ ಮುಕ್ತಗೊಳಿಸುವ ಪ್ರಥಮ ಕಾರ್ಯಾಚರಣೆಯಿಂದ ಹಿಡಿದು, ದೇಶದ ಎಲ್ಲಾ ಯುದ್ಧಗಳು ಮತ್ತು ಸಂಘರ್ಷಗಳಲ್ಲಿ ಪದಾತಿ ದಳದ ಕೊಡುಗೆ ಅಪಾರ.
0
0
2
'ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನʼ ಎಂದು ಸಾರಿದ ಶಬ್ದ ಗಾರುಡಿಗ, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವರಕವಿ ಹಾಗೂ ಜ್ಞಾನಪೀಠ ಪುರಸ್ಕೃತರಾದ ಶ್ರೀ ದ. ರಾ. ಬೇಂದ್ರೆ ಅವರ ಪುಣ್ಯಸ್ಮರಣೆಯಂದು ಅಗಣಿತ ಪ್ರಣಾಮಗಳು.
0
0
2
🥇 ಖೋ ಖೋ ಚಾಂಪಿಯನ್: ನನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ನಿಡಗುಂದಿ ತಾಲೂಕಿನ ಬೇನಾಳ ಆರ್. ಸಿ. ಬಾಲಕಿಯರ ತಂಡಕ್ಕೆ ಅಭಿನಂದನೆಗಳು ಕರ್ನಾಟಕ 2025 ರ ಖೋ ಖೋ ಚಾಂಪಿಯನ್‌ಶಿಪ್‌ನಲ್ಲಿ ವಿಜಯ ಸಾಧಿಸಿದ ಪಿಎಂ ಶ್ರೀ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಬೇನಾಳ RC ಯ 14 ವರ್ಷದೊಳಗಿನ ಬಾಲಕಿಯರ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು
0
1
6
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡೆ. ರಾಜ್ಯದಲ್ಲಿ ಸಹಕಾರ ಚಳವಳಿಯನ್ನು ಇನ್ನಷ್ಟು ಬಲಪಡಿಸುವ ಮತ್ತು ಸಹಕಾರ ಸಂಸ್ಥೆಗಳು ಅಭಿವೃದ್ಧಿಯಲ್ಲಿ ವಹಿಸಬೇಕಾದ ಪಾತ್ರದ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು.
0
0
2
ಬ್ರಿಟಿಷರ ಕುತಂತ್ರ, ಶೋಷಣೆ ಮತ್ತು ವಸಾಹತುಶಾಹಿಯ ವಿರುದ್ಧ ನಿಂತು ಹೋರಾಡಿದ ಧೀರ ಮಹಿಳೆ, ಮಹಿಳೆಯರ ಶಕ್ತಿ ಮತ್ತು ಸ್ವಾತಂತ್ರ್ಯದ ಸಂಕೇತವಾದ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯಂದು ವಿನಯಪೂರ್ವಕ ನಮನಗಳು. #kitturranichennamma
0
0
3
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ತೆಲಗಿ ಗ್ರಾಮದ ಶ್ರೀ ಸಂಜಯಕುಮಾರ ಯಂಕನಗೌಡ ಬಿರಾದಾರ ಅವರು ಕೇಂದ್ರ ಸರ್ಕಾರದ ಯುವ ಸಬಲೀಕರಣ ಸಚಿವಾಲಯದ ‘ಮೈ ಭಾರತ್ ರಾಷ್ಟ್ರೀಯ ಸೇವಾ ಯೋಜನೆ’ (My Bharat NSS Award) ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ಸಂದರ್ಭದಲ್ಲಿ, ಅವರು ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲಿ ಎಂದು ಶುಭ ಹಾರೈಸಿದೆ.
0
0
1