drnagalakshmi_c Profile Banner
Dr Nagalakshmi | ಡಾ. ನಾಗಲಕ್ಷ್ಮಿ Profile
Dr Nagalakshmi | ಡಾ. ನಾಗಲಕ್ಷ್ಮಿ

@drnagalakshmi_c

Followers
6K
Following
480
Media
2K
Statuses
3K

State Women Commission President | Pediatric Dentist | Professor | Official handle

Bengaluru, India
Joined February 2016
Don't wanna be here? Send us removal request.
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
2 years
ನಾವೆಲ್ಲ ಒಂದು, ಸದಾ ನಾ ನಿಮ್ಮೊಂದಿಗಿರುವೆ ಇಂದು, ಮುಂದು, ಎಂದೆಂದೂ.! #reelsviral #motivationalquotes #quotesdaily #quotesaboutlife #quotestoliveby #motivationalspeech
39
30
332
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
7 hours
ಐದು ವರ್ಷದ ಒಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ. ಪೋಲಿಯೋಮುಕ್ತ ಸಮಾಜವು ಮಕ್ಕಳ ಭವ್ಯ-ಸುಂದರ ಭವಿಷ್ಯಕ್ಕೆ ನಮ್ಮ ಕೊಡುಗೆಯಾಗಲಿ. ನಿಮ್ಮ ಹತ್ತಿರದ ಪೋಲಿಯೋ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ, ನಿಮ್ಮ ಮಗುವಿನ ಆರೋಗ್ಯಕರ ಭವಿಷ್ಯಕ್ಕಾಗಿ ಎರಡು ಹನಿ‌ ಪೋಲಿಯೋ ಲಸಿಕೆ ಹಾಕಿಸಿ. #pulspolio
0
0
1
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
1 day
ಇಂತಹ ಸಾಮಾಜಿಕ ಜಾಗೃತಿಯಿಂದಾಗಿಯೇ 500 ವರ್ಷಗಳು ಕಳೆದರೂ ಕನಕದಾಸರು ವೈಚಾರಿಕವಾಗಿ ನಮ್ಮೊಡನಿದ್ದಾರೆ. ಅವರ ನುಡಿಗಳ ದಾರಿಯಲ್ಲಿ ನಡೆಯುತ್ತಿರುವ ಮಗಳು ನಾನು. ನನ್ನನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಹೊನ್ನಾಳಿ ಮಂಜಣ್ಣನವರಿಗೆ ಹಾರ್ದಿಕ ಅಭಿನಂದನೆಗಳು. #KanakadasaJayanti #honnali #drnagalakshmi
0
1
6
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
1 day
ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದೆ‌. ಕನಕದಾಸರ ಭಕ್ತಿಮಾರ್ಗವು ನಮಗೆಲ್ಲರಿಗೂ ಆದರ್ಶವಾಗಿದೆ. ದಾಸಶ್ರೇಷ್ಠರ ಪದಗಳು ಹಾಗೂ ವಿಚಾರಗಳು ಸಮಾಜದಲ್ಲಿ ನಡೆಯುತ್ತಿದ್ದಂತಹ ಅಸಮಾನತೆ-ಕಂದಾಚಾರಗಳ ವಿರುದ್ಧ ಪ್ರಬಲ ಧ್ವನಿಯಾಗಿ ಮೂಡಿಬಂದವು, #womencommission #EqualityAndJustice
1
1
8
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
2 days
ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಬಂಗಾರಿಹಟ್ಟಿ ಗ್ರಾಮಕ್ಕೆ ಭೇಟಿ‌ ನೀಡಿದೆ. ಈ ಸಂದರ್ಭದಲ್ಲಿ‌ ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ‌ ಮೂಡನಂಬಿಕೆಯ ವಿರುದ್ಧ ಜಾಗೃತಿ ಮೂಡಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾತನಾಡಿದೆ. ಈ ಬಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಗಳು ಇಲ್ಲಿವೆ. #DrNagalakshmi #StopSuperstition
0
4
5
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
2 days
ಹೊಸ ಬೈಯಪ್ಪನಹಳ್ಳಿಯಲ್ಲಿ ಭಕ್ತ ಕನಕದಾಸರ ಜಯಂತ್ಯೋತ್ಸವದಲ್ಲಿ ಭಾಗವಹಿಸಿ.ಪಾಲ್ಗೊಂಡ ವೇಳೆ ಸ್ಥಳೀಯ ಮಹಿಳೆಯರು ಅವರ ಸಮಸ್ಯೆಗಳನ್ನು ನನ್ನಲ್ಲಿ ಹೇಳಿಕೊಂಡರು.ಅಲ್ಲಿನ ಅಬಕಾರಿ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ,ಕಮಿಷನರ್‌ಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಆಯೋಗಕ್ಕೆ ವರದಿ ಕಳುಹಿಸುವಂತೆ ಸೂಚಿಸಿದೆ‌
0
2
14
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
3 days
ಇಂದು ಸಂಜೆ 7.30ಕ್ಕೆ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಚಂದನ-ಮಂಥನ' ಕಾರ್ಯಕ್ರಮದಲ್ಲಿ ನಾನು 'ನಯಿ ಚೇತನ - ಮಹಿಳಾ ಅಭ್ಯುದಯಕ್ಕೆ ನೂತನ ಅಭಿಯಾನ'ದ ಕುರಿತು ಮಾತನಾಡಲಿದ್ದೇನೆ. ಕಾರ್ಯಕ್ರವನ್ನು ವೀಕ್ಷಿಸಿ, ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. @DDChandanaNews
1
1
6
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
3 days
ನನ್ನ ಕಚೇರಿಗೆ ಆಗಮಿಸಿ ಹಲವಾರು ಹೆಣ್ಣುಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅವರ ಮಾತನ್ನು ಆಲಿಸಿ, ಅವರ‌ ಸಮಸ್ಯೆಗಳಿಗೆ ಸ್ಪಂದಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿದ್ದೇನೆ.
1
5
18
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
3 days
ಆದ್ದರಿಂದ ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಕ್ಕೆ ಸರ್ಕಾರ ಮುಂದಾಗಬೇಕು ಎನ್ನುವ ಮನವಿಯ ಕುರಿತಂತೆ ಪ್ರಕಟವಾಗಿರುವ ಪತ್ರಿಕಾ ವರದಿ. #WomenSafety #IllegalLiquor #LiquorBanNow #ProtectWomen #SaveFamilies #StopIllegalLiquor #PublicHealthFirst #WomenCommission #ResponsibleGovernance #EndLiquorMenace
0
0
1
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
3 days
ಇತ್ತೀಚಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಅಕ್ರಮ ಮದ್ಯ ಮಾರಾಟ ಹಾಗೂ ಹೆಚ್ಚುತ್ತಿರುವ ಮದ್ಯದಂಗಡಿಗಳ ಕುರಿತಂತೆ ದೂರು ಸಲ್ಲಿಕೆಯಾಗುತ್ತಿದೆ. ಮದ್ಯಪಾನದಿಂದಾಗಿ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಮಕ್ಕಳನ್ನೂ ಒಳಗೊಂಡು ಮಹಿಳೆಯರು ಸಾಕಷ್ಟು ಕಷ್ಟ ಅನುಭವಿಸುತ್ತಿದ್ದಾರೆ.
1
1
2
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
4 days
ಎಎಂ ಸ್ಪೋರ್ಟ್ಸ್‌ನವರು ಟಿ.ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿದೆ.‌ ರಾಜ್ಯದ ವಿವಿಧ ಭಾಗಗಳಿಂದ ಆಟಗಾರರು ಭಾಗವಹಿಸಿದ್ದರು. ರಾಷ್ಟ್ರೀಯ ಆಟಗಾರರೂ ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. #DrNagalakshmi #WomenInSports #BadmintonTournament #AMSports
0
5
25
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
4 days
ಡಿಸೆಂಬರ್ 18ರಂದು ತುಮಕೂರು ಜಿಲ್ಲಾ ಪ್ರವಾಸವನ್ನು ಕೈಗೊಳ್ಳುತ್ತಿದ್ದು,‌ ಪ್ರವಾಸದ ವಿವರಗಳನ್ನು ಒಳಗೊಂಡ ಪತ್ರಿಕಾ ವರದಿ ಇಲ್ಲಿದೆ. #DrNagalakshmi #WomensCommission #KarnatakaStateCommissionForWomen #TumakuruDistrict #DistrictTour #PublicOutreach #WomenEmpowerment #WomenRights #ServiceToSociety
1
3
5
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
4 days
ನಾಳೆ ದಿನಾಂಕ 18-12-2025ರಂದು ಶಿರಾದ ಐ.ಬಿ‌ ಸರ್ಕಲ್‌ನಿಂದ “ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಆರೋಗ್ಯ ಹಾಗೂ ಮೂಢನಂಬಿಕೆ ಆಚರಣೆಗಳ ವಿರುದ್ಧ ವಾಕಥಾನ್ ಕಾರ್ಯಕ್ರಮ” ಹಮ್ಮಿಕೊಳ್ಳಲಾಗಿದೆ. ನೀವೆಲ್ಲರೂ ಈ ವಾಕಥಾನ್‌ನಲ್ಲಿ ಭಾಗವಹಿಸಿ. ನಾಳೆ‌ ನಿಮ್ಮೊಡನೆ ನಾನೂ ಇರಲಿದ್ದೇನೆ. #WalkForAwareness #WomenCommission #WalkathonForChange
1
3
14
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
5 days
50 ವರ್ಷ ಮೇಲ್ಪಟ್ಟ ಮಹಿಳೆಯರೂ ಸಹ ಭಾಗವಹಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದನ್ನು ನೋಡಿ ವಯಸ್ಸು ಎನ್ನುವುದು ಕೇವಲ ಸಂಖ್ಯೆಯಷ್ಟೇ ಎನ್ನುವ‌ ಮಾತನ್ನು ನೆನಪಿಸುವಂತಿತ್ತು. ಅವರೆಲ್ಲರ ಉತ್ಸಾಹ-ಸ್ಪರ್ಧಾಮನೋಭಾವ ನಿಜಕ್ಕೂ‌ ಸ್ಪೂರ್ತಿದಾಯಕವಾದದ್ದು. #TDasarahalli #SportsForAll #AgeIsJustANumber #WomenAthletes #FitAtAnyAge
0
0
1
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
5 days
ಎಎಂ ಸ್ಪೋರ್ಟ್ಸ್‌ನವರು ಟಿ.ದಾಸರಹಳ್ಳಿಯಲ್ಲಿ ಆಯೋಜಿಸಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿದೆ.‌ ರಾಜ್ಯದ ವಿವಿಧ ಭಾಗಗಳಿಂದ ಆಟಗಾರರು ಭಾಗವಹಿಸಿದ್ದರು. ರಾಷ್ಟ್ರೀಯ ಆಟಗಾರರೂ ಈ‌ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಮೆರುಗು ತುಂಬಿದರು. #DrNagalakshmi #WomenInSports #BadmintonTournament #AMSports
1
3
6
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
6 days
History made! Congratulations to the Indian Squash Team on winning their first-ever World Cup title at the SDAT Squash World Cup 2025. Joshna Chinnappa, Abhay Singh, Velavan Senthil Kumar & Anahat Singh have made the nation immensely proud!
0
0
5
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
6 days
ಕನ್ನಡದ ಹಿರಿಮೆ-ಶ್ರೇಷ್ಠತೆಯ ಕುರಿತಂತೆ ಮಾತನಾಡಿ ಪ್ರತಿದಿನವೂ ಕನ್ನಡದ ಸಂಭ್ರಮಾಚರಣೆಯಾಗಿರಲಿ ಎಂದು ಹೇಳಿದೆ. #KannadaRajyotsava #ProudKannadiga #KannadaCulture #LanguageAndIdentity #WomenLeadership #EmpoweringVoices #CulturalPride #CelebrateKannada #IndustrialBengaluru #CommunityEngagement
0
0
0
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
6 days
ಬೆಂಗಳೂರಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ನ ಮಹೀಂದ್ರಾ ಕನ್ನಡ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಆಚರಣೆಯಲ್ಲಿ ಪಾಲ್ಗೊಂಡೆ. ವೃತ್ತಿಜೀವನದ ಜೊತೆಜೊತೆಗೆ ಕನ್ನಡ ಪ್ರೇಮವನ್ನು ಮೆರೆಯುವಂತಹ ಇಂತಹ ಕನ್ನಡದ ಕಟ್ಟಾಳುಗಳು ನಿಜಕ್ಕೂ ಹೆಮ್ಮೆ ಮೂಡಿಸುತ್ತಾರೆ.
1
3
8
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
7 days
ಈ‌ ನಾಡಿಗೆ ಅವರು ಸಲ್ಲಿಸಿರುವ ಸೇವೆ ಅಪಾರ. ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬವರ್ಗ ಹಾಗೂ ಅಭಿಮಾನಿವರ್ಗಕ್ಕೆ ಭಗವಂತ ಕರುಣಿಸಲಿ ಹಾಗೂ ಮೃತರ ಆತ್ಮಕ್ಕೆ‌ ಸದ್ಗತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. #condolences #shamnurushivshankrappa
0
0
0
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
7 days
ಹಿರಿಯ ಕಾಂಗ್ರೆಸ್ ನಾಯಕರು, ಮಾಜಿ‌ ಸಚಿವರು, ಶಾಸಕರು, ಅಖಿಲ ಭಾರತ‌ ವೀರಶೈವ ಮಹಾಸಭಾದ ಅಧ್ಯಕ್ಷರಾದ ಶ್ರೀ ಶಾಮನೂರು ಶಿವಶಂಕರಪ್ಪ ಅವರು ವಿಧಿವಶರಾದ ಸುದ್ದಿ ತಿಳಿದು ದುಃಖವಾಗಿದೆ.
1
4
9
@drnagalakshmi_c
Dr Nagalakshmi | ಡಾ. ನಾಗಲಕ್ಷ್ಮಿ
7 days
ಸೌಲಭ್ಯ-ಸವಲತ್ತುಗಳನ್ನು ಉದ್ಯೋಗಸ್ಥ ಮಹಿಳೆಯರು ಹೊಂದುವುದು ಅವರ ಹಕ್ಕು ಹಾಗೂ ಅದನ್ನು ಒದಗಿಸುವುದು ಉದ್ಯೋಗದಾತರ ಕರ್ತವ್ಯ. #DrNagalakshmi #KarnatakaStateWomenCommission #WomenRights #WorkingWomen #GenderJustice #POSHAct #SafeWorkplace #WomenAtWork #EmployeeWelfare #BasicAmenities #WomenEmpowerment
0
1
1