DMAiholeBJP Profile Banner
Duryodhan Aihole (Modi Ka Parivar) Profile
Duryodhan Aihole (Modi Ka Parivar)

@DMAiholeBJP

Followers
1K
Following
7K
Media
4K
Statuses
5K

MLA from Raybag Assembly Constituency And Former Chairman of Karnataka Adijambava Development Corporation

Raybag
Joined September 2020
Don't wanna be here? Send us removal request.
@narendramodi
Narendra Modi
22 hours
Sharing my speech from the @BJP4India HQ earlier today.
988
4K
24K
@narendramodi
Narendra Modi
22 hours
भाजपा के राष्ट्रीय अध्यक्ष का कार्यभार संभालने पर नितिन नबीन जी को बहुत-बहुत बधाई एवं शुभकामनाएं। वे इस अहम पद पर पहुंचने वाले पार्टी के सबसे युवा नेता हैं। अपने अथक परिश्रम और समर्पण भाव से संगठन के दायित्वों को पूरी जिम्मेदारी के साथ निभाते हुए उन्होंने यहां तक का सफर तय किया
1K
9K
57K
@DMAiholeBJP
Duryodhan Aihole (Modi Ka Parivar)
16 hours
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಮಾಜಿ ಸಚಿವರಾದ ಶ್ರೀ ಎ. ನಾರಾಯಣಸ್ವಾಮಿ, ಸಂಸದರಾದ ಶ್ರೀ ಯದುವೀರ್ ಕೃಷ್ಣರಾಜ ದತ್ತ ಒಡೆಯರ್, ಮಾಜಿ ಸಂಸದರಾದ ಶ್ರೀ ಬಿ.ಎನ್. ಚಂದ್ರಪ್ಪ ಸೇರಿದಂತೆ ವಿವಿಧ ಮಠಧೀಶರು, ಗಣ್ಯರು ಉಪಸ್ಥಿತರಿದ್ದರು. 2/2
0
0
2
@DMAiholeBJP
Duryodhan Aihole (Modi Ka Parivar)
16 hours
ಚಿತ್ರದುರ್ಗದ ಶ್ರೀ ಶಿವಶರಣ ಮಾದಾರಚನ್ನಯ್ಯ ಗುರುಪೀಠದಲ್ಲಿ ಶ್ರೀ ಮಾದಾರಚನ್ನಯ್ಯ ಸ್ವಾಮೀಜಿಯವರ ಹಾಗೂ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಕುಲದೇವತೆ ಶ್ರೀ ಆದಿಶಕ್ತಿ ಮಾತಂಗೇಶ್ವರಿ ದೇವಿ ದೇವಾಲಯ ನಿರ್ಮಾಣದ ಭೂಮಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿ, ಗುದ್ದಲಿ ಪೂಜೆ ಮಾಎಇ ಚಾಲನೆ ನೀಡಲಾಯಿತು. 1/2
1
0
2
@DMAiholeBJP
Duryodhan Aihole (Modi Ka Parivar)
1 day
ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಚುನಾಯಿತರಾದ ಶ್ರೀ ನಿತಿನ್‌ ನಬಿನ್‌ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐
0
0
1
@DMAiholeBJP
Duryodhan Aihole (Modi Ka Parivar)
3 days
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ವಿಶಾಳಿ ಜಾತ್ರೆ ಹಾಗೂ ಮಹಾರಥೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು, ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಆಶೀರ್ವಾದ ಪಡೆದು ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
0
0
1
@DMAiholeBJP
Duryodhan Aihole (Modi Ka Parivar)
4 days
ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳು(ಕಾಡಾ) ವತಿಯಿಂದ ಮಂಜೂರಾದ 29 ಲಕ್ಷ ರೂ. ವೆಚ್ಚದಲ್ಲಿ ಸವದತ್ತಿ-ಹಳೆ ದಿಗ್ಗೇವಾಡಿ ರಸ್ತೆಯಿಂದ ಸತ್ತೆಪ್ಪ ಚಂಪು ಅವರ ತೋಟದವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಇಂದು ರಾಯಬಾಗ ವಿಧಾನಸಭಾ ಕ್ಷೇತ್ರದ ಬಾವನ ಸವದತ್ತಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
0
0
2
@DMAiholeBJP
Duryodhan Aihole (Modi Ka Parivar)
4 days
ರಾಯಬಾಗ ವಿಧಾನಸಭಾ ಕ್ಷೇತ್ರದ ಕಂಚಕರವಾಡಿ ಗ್ರಾಮದ ಶ್ರೀ ಮಹದೇವ ದೇವಸ್ಥಾನದ ಹತ್ತಿರ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ಕೈಗೊಳ್ಳುವ ಮೂಲಕ ಚಾಲನೆ ನೀಡಲಾಯಿತು.
0
0
2
@DMAiholeBJP
Duryodhan Aihole (Modi Ka Parivar)
6 days
ರಾಯಬಾಗ ವಿಧಾನಸಭಾ ಕ್ಷೇತ್ರದ ನಸಲಾಪುರ ಗ್ರಾಮದಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ಜೈನ ಸಮುದ��ಯದ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಲಾಯಿತು. ಈ ವೇಳೆ ಗ್ರಾಮದ ಹಿರಿಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
0
0
2
@DMAiholeBJP
Duryodhan Aihole (Modi Ka Parivar)
7 days
ರಾಯಬಾಗ ಕ್ಷೇತ್ರದ ಯಡ್ರಾಂವ ಗ್ರಾಮದ ಶ್ರೀ ಬಿರೇಶ್ವರ ದೇವಸ್ಥಾನದ ಹತ್ತಿರ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ವೇಳೆ ಗ್ರಾಮದ ಪ್ರಮುಖರು, ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
0
0
1
@DMAiholeBJP
Duryodhan Aihole (Modi Ka Parivar)
7 days
ದಿನಾಂಕ 22-01-2026 ರಂದು ರಾಯಬಾಗದಲ್ಲಿ ನಡೆಯಲಿರುವ "ಐಹೊಳೆ ಗಾಯನ ಪ್ರತಿಭಾ ಪುರಸ್ಕಾರ ಸೀಸನ್ 9"ರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳನ್ನಾಗಿ ಕನ್ನಡದ ಖ್ಯಾತ ನಟ ಶ್ರೀ ವಿ. ರವಿಚಂದ್ರನ್ ಅವರನ್ನು ಇಂದು ಶ್ರೀ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ನಿಡಗುಂದಿ ಗ್ರಾ.ಪಂ ಸದಸ್ಯರಾದ ಶ್ರೀ ಅರುಣ ಐಹೊಳೆಯವರು ಆಹ್ವಾನಿಸಿದರು.
0
0
3
@DMAiholeBJP
Duryodhan Aihole (Modi Ka Parivar)
8 days
ರಾಯಬಾಗ ವಿಧಾನಸಭಾ ಕ್ಷೇತ್ರದ ಬಾವಚಿ ಗ್ರಾಮದಲ್ಲಿ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 5 ಲಕ್ಷ ರೂ. ವೆಚ್ಚದಲ್ಲಿ ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಸ್ಮಶಾನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕೈಗೊಂಡು ಚಾಲನೆ ನೀಡಲಾಯಿತು.
0
0
1
@DMAiholeBJP
Duryodhan Aihole (Modi Ka Parivar)
9 days
"ಏಳಿರಿ, ಎಚ್ಚರಗೊಳ್ಳಿರಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ" ಎಂಬ ಸಂದೇಶವನ್ನು ಕೇಳದ ಭಾರತೀಯರೇ ಇಲ್ಲ. ಇಂತಹ ಸಂದೇಶ ನೀಡಿದ ಸಂತ ಶ್ರೇಷ್ಠ, ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ, ಹೆಮ್ಮೆಯ ಪುತ್ರ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಭಕ್ತಿಪೂರ್ವಕ ನಮನಗಳು. ಅವರ ಜನ್ಮ ದಿನಾಚರಣೆಯನ್ನು ರಾಷ್ಟ್ರದಾದ್ಯಂತ "ಯುವ ದಿನ" ಎಂದು ಆಚರಿಸಲಾಗುತ್ತದೆ.
0
0
1
@narendramodi
Narendra Modi
10 days
#SomnathSwabhimanParv is about faith and fortitude. Somnath carries the memory of countless sacrifices, which continues to motivate us. It is as much about divinity and civilisational greatness. Here are highlights from today…
1K
7K
47K
@DMAiholeBJP
Duryodhan Aihole (Modi Ka Parivar)
11 days
ಹಾರೂಗೇರಿಯಲ್ಲಿ ನಡೆಯುತ್ತಿರುವ ೧೭ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳ ಹಾಗೂ ಅಥಣಿಯ ಮೋಟಗಿಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಉದ್ಘಾಟಿಸಿ, ನಾವೆಲ್ಲರೂ ಮಾತೃಭಾಷೆಯನ್ನು ಸಂಭ್ರಮಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳಲಾಯಿತು.
0
0
1
@DMAiholeBJP
Duryodhan Aihole (Modi Ka Parivar)
11 days
ಇದೇ ಜನವರಿ 22 ರಂದು ರಾಯಬಾಗ ನಗರದಲ್ಲಿ ನಡೆಯಲಿರುವ "ಐಹೊಳೆ ಗಾಯನ ಪ್ರತಿಭಾ ಪ್ರಶಸ್ತಿ ಸೀಸನ್-9" ರ ನಿಮಿತ್ತವಾಗಿ ಇಂದು ಹುಕ್ಕೇರಿ ಹೀರೆಮಠದ ಪರಮಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ‌ ದಿವ್ಯ ಸಾನಿಧ್ಯದಲ್ಲಿ ಗಾಯನ ಸ್ಪರ್ಧಾರ್ಥಿಗಳಿಗೆ ಆಡಿಷನ್ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಲಾಯಿತು.
0
0
1
@DMAiholeBJP
Duryodhan Aihole (Modi Ka Parivar)
12 days
ಇನಾಮ್ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆಯ ಘಟನೆಯಲ್ಲಿ ತಂದೆ ಪ್ರಕಾಶ್‌ಗೌಡ ಅವರಿಂದ ಹಲ್ಲೆಗೊಳಗಾದ ನಂತರ ಅವರು ಸಾವನ್ನಪ್ಪಿದರು. ಭಾರತದ ಪ್ರತಿಯೊಬ್ಬ ವಯಸ್ಕ ನಾಗರಿಕನಿಗೆ ತಮ್ಮ ಆಯ್ಕೆಯ ಯಾವುದೇ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಸಂವಿಧಾನವು ನೀಡಿದೆ. ಆದರೂ ಈ ತರಹದ ಕೃತ್ಯಗಳು ನಡೆಯುತ್ತಿರುವುದು ದುರದೃಷ್ಟಕರ.
0
0
1
@DMAiholeBJP
Duryodhan Aihole (Modi Ka Parivar)
12 days
ಕರ್ನಾಟಕ ವಿಧಾನಮಂಡಲದ ಅ.ಜಾ ಮತ್ತು ಅ.ಪಂ ಕಲ್ಯಾಣ ಸಮಿತಿಯ ವತಿಯಿಂದ ಹುಬ್ಬಳ್ಳಿಯ ಮಾನ್ಯ ಹತ್ಯೆಯನ್ನು ಖಂಡಿಸಿ, ಇಂದು ದಲಿತ ಯುವಕನ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಲಾಯಿತು. 7 ತಿಂಗಳ ಗರ್ಭಿಣಿಯಾಗಿದ್ದ 20 ವರ್ಷದ ಮಾನ್ಯಾ ಎಂಬ ಯುವತಿಯು ದಲಿತ ವ್ಯಕ್ತಿ ವಿವೇಕಾನಂದ ಅವರನ್ನು ವಿವಾಹವಾಗಿದ್ದರು. ಕಳೆದ ತಿಂಗಳ ಕೊನೆಯಲ್ಲಿ ಧಾರವಾಡದ 1/2
1
0
1
@DMAiholeBJP
Duryodhan Aihole (Modi Ka Parivar)
12 days
ಇಂದು ಪ್ರವಾಸಿ ಭಾರತೀಯ ದಿವಸ್ - ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಅನಿವಾಸಿ ಭಾರತೀಯರು ತಾಯ್ನಾಡಿಗೆ ನೀಡುತ್ತಿರುವ ಕೊಡುಗೆಗಳನ್ನು ಸ್ಮರಿಸುವುದು ಇದರ ಉದ್ದೇಶ. #PravasiBharatiyaDiwas
0
0
1
@DMAiholeBJP
Duryodhan Aihole (Modi Ka Parivar)
13 days
BJP ಚಿಕ್ಕೋಡಿ ಜಿಲ್ಲಾ ವತಿಯಿಂದ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ VB-G RAM G ಯೋಜನೆ ಕುರಿತಾದ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಲಾಯಿತು. ಈ ವೇಳೆ ರಾಜ್ಯಸಭಾ ಸದಸ್ಯರಾದ ಶ್ರೀ @Irannakadadi_MP, ಪಕ್ಷದ ಜಿಲ್ಲಾಧ್ಯಕ್ಷರಾದ ಶ್ರೀ ಸತೀಶ ಅಪ್ಪಾಜಿಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.
0
0
1